78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮಗೆಲ್ಲಾ ಹಾರ್ದಿಕ ಸುಸ್ವಾಗತ...... ಅಕ್ಷರ ಜಾತ್ರೆಗೆ ಬನ್ನಿ..... WELCOME TO GANGAVATHI ( KOPPAL DISTRICT) ಕೊಪ್ಪಳ ಜಿಲ್ಲೆಯ ಮಾಹಿತಿ,ಪ್ರವಾಸಿ ತಾಣಗಳ ವಿವರಗಳಿಗಾಗಿ kannadanet.com, kannadanet.blogspot.com ನೋಡಿ

Sunday, December 11, 2011

ಊಟೋಪಚಾರ ವ್ಯವಸ್ಥೆ ಎಲ್ಲರಿಗೂ ಅಚ್ಚುಮೆಚ್ಚು


ಗಂಗಾವತಿ ಡಿ.   ಗಂಗಾವತಿಯಲ್ಲಿ ಕಳೆದ ಡಿ. ೯ ರಿಂದ ಮೂರು ದಿನಗಳ ಕಾಲ ನಡೆದ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಾಸೋಹ ಸಮಿತಿಯ ಊಟೋಪಚಾರದ ವ್ಯವಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.  ಸಾರ್ವಜನಿಕರಿಗೆ ಒದಗಿಸಿದ ಊಟದ ವ್ಯವಸ್ಥೆಯ ಜೊತೆಗೆ ಮಾಧ್ಯಮ ಕೇಂದ್ರದ ಬಳಿಯೇ ಪತ್ರಕರ್ತರಿಗಾಗಿ ತೆರೆಯಲಾಗಿದ್ದ ಪ್ರತ್ಯೇಕ ಊಟದ ಮಳಿಗೆಯಲ್ಲಿ ನೀಡಿದ ಊಟೋಪಚಾರದ ವ್ಯವಸ್ಥೆಗೆ ಎಲ್ಲ ಮಾಧ್ಯಮದವರಿಂದ ಪ್ರಶಂಸೆ ವ್ಯಕ್ತವಾಗಿದೆ.
  ಗಂಗಾವತಿಯಲ್ಲಿ ಜರುಗಿದ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿಂದಿನ ಎಲ್ಲ ಸಮ್ಮೇಳನಕ್ಕಿಂತಲೂ ಉತ್ತಮ ಅಭೂತಪೂರ್ವ ಯಶಸ್ವಿಗೆ ಸಾಕ್ಷಿಯಾಯಿತು.  ಹಿಂದಿನ ಎಲ್ಲಾ ಸಮ್ಮೇಳನಗಳಲ್ಲಿ ಸಾಮಾನ್ಯವಾಗಿ ಊಟದ ಅವ್ಯವಸ್ಥೆಯ ಕಾರಣದಿಂದ ಜನಸಾಮಾನ್ಯರಿಗೆ ಸಾಕಷ್ಟು  ಕಿರಿ ಕಿರಿ ಉಂಟಾಗಿತ್ತು.  ಅಲ್ಲದೆ ಸಮ್ಮೇಳನದ ಯಶಸ್ವಿಗೂ ತೊಡಕಾಗಿ ಪರಿಣಮಿಸಿತ್ತು.  ಆದರೆ ಗಂಗಾವತಿಯಲ್ಲಿ ನಡೆದ ಸಮ್ಮೇಳನ ಇದೆಲ್ಲ ಸಮಸ್ಯೆಗಳನ್ನು ನಿವಾರಿಸಿ, ನಿರೀಕ್ಷೆಗಿಂತಲೂ ಹೆಚ್ಚಾಗಿಯೇ ಜನಸಾಗರ ಹರಿದುಬಂದರೂ ಸಹ ಊಟೋಪಚಾರದ ವ್ಯವಸ್ಥೆಯಲ್ಲಿ ಯಾವುದೇ ತೊಂದರೆಯಾಗದಂತೆ ದಾಸೋಹ ಸಮಿತಿ ಕೆಲಸ ನಿರ್ವಹಿಸಿದ ಪರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.   
  ಸಮ್ಮೇಳನದ ಕಂಪನ್ನು ಇಡೀ ನಾಡಿಗೆ ಪಸರಿಸಲು ರಾಜ್ಯದ ವಿವಿದೆಡೆಗಳಿಂದ ಆಗಮಿಸಿದ್ದ ಟಿ.ವಿ ಹಾಗೂ ಪತ್ರಿಕಾ ಮಾಧ್ಯಮದವರಿಗಾಗಿ ಮುಖ್ಯ ವೇದಿಕೆಯ ಬಳಿ ಸ್ಥಾಪಿಸಲಾಗಿದ್ದ ಸುಸಜ್ಜಿತ ಮಾಧ್ಯಮ ಕೇಂದ್ರದ ಪಕ್ಕದಲ್ಲಿಯೇ ಒಂದು ಮಳಿಗೆಯನ್ನು ನಿರ್ಮಿಸಿ ಮಾಧ್ಯಮದವರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.  ಮಾಧ್ಯಮದವ ಊಟೋಪಚಾರಕ್ಕಾಗಿಯೇ ದಾಸೋಹ ಸಮಿತಿ ಸುಮಾರು ೧೨ ಜನರ ತಂಡವನ್ನು ರಚಿಸಿ, ಊಟದ ವ್ಯವಸ್ಥೆಯ ಕಾರ್ಯಾಚರಣೆ ನಡೆಸಿತು.  ಮಾಧ್ಯಮದವರಿಗೆ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿಯ ಊಟೋಪಹಾರವನ್ನು ಸಮಯಕ್ಕೆ ಸರಿಯಾಗಿ ವ್ಯವಸ್ಥಿತ ರೀತಿಯಲ್ಲಿ ತಲುಪುವಂತೆ ವ್ಯವಸ್ಥೆಗೊಳಿಸಲಾಗಿತ್ತು.  ಸುದ್ದಿ ಕಳುಹಿಸುವ ಭರಾಟೆಯಲ್ಲಿ ಊಟವನ್ನೂ ಮರೆಯುತ್ತಿದ್ದ ಮಾಧ್ಯಮದವರಿಗೆ ದಾಸೋಹ ಸಮಿತಿಯವರು ಊಟ ಮಾಡುವಂತೆ ಪದೇ ಪದೇ ಮಾಧ್ಯಮದವರಿಗೆ ಕರೆ ನೀಡುತ್ತಿದ್ದುದು ನಿಜಕ್ಕೂ ಗಂಗಾವತಿಯರ ಆತ್ಮೀಯತೆಯನ್ನು ಎತ್ತಿ ತೋರಿಸಿತು.   ದಾಸೋಹ ಸಮಿತಿಯಲ್ಲಿ ಊಟದ ಹೊಣೆಗಾರಿಕೆಯನ್ನು ಹೊತ್ತಿದ್ದ ಆಹಾರ ಸಮಿತಿಯ ಅಧ್ಯಕ್ಷ ಕೆ. ಕಾಳಪ್ಪ, ಜೊತೆಗೆ ದಾಸೋಹ ಸಮಿತಿಯ ಸಿದ್ದಣ್ಣ ಮಸ್ಕಿ, ವಿನೋದ್, ಜಿತೇಂದ್ರ, ಶಿವಪ್ಪ, ಶ್ರೀನಿವಾಸ, ವೆಂಕಟೇಶ್ ಕಲ್ಯಾಣಿ, ನಾಗೇಶ್ ಮೋಹಿತ, ಕೃಷ್ಣಯ್ಯ, ಶರಣಪ್ಪ ಮಾಲಿಪಾಟೀಲ, ಸಿರಿಗೆರಿ ಬದ್ರಿನಾಥ, ಈರಣ್ಣ ಮುಂತಾದವರ ಸೇವಾ ಮನೋಭಾವನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
  ಒಟ್ಟಾರೆ ಗಂಗಾವತಿಯಲ್ಲಿ ನಡೆದ ಸಮ್ಮೇಳನದಲ್ಲಿ ಅತಿಥಿಗಳು, ಕಲಾವಿದರು, ಆಹ್ವಾನಿತರು, ಗಣ್ಯರು, ಮಾಧ್ಯಮದವರು ಸೇರಿದಂತೆ ಎಲ್ಲರಿಗೂ ಸಮರ್ಪಕವಾಗಿ ಊಟೋಪಚಾರ ಒದಗಿಸಿದ ದಾಸೋಹ ಮತ್ತು ಆಹಾರ ಸಮಿತಿಯ ಕಾರ್ಯವೈಖರಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದಂತೂ ನಿಜ.

No comments:

Post a Comment