78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮಗೆಲ್ಲಾ ಹಾರ್ದಿಕ ಸುಸ್ವಾಗತ...... ಅಕ್ಷರ ಜಾತ್ರೆಗೆ ಬನ್ನಿ..... WELCOME TO GANGAVATHI ( KOPPAL DISTRICT) ಕೊಪ್ಪಳ ಜಿಲ್ಲೆಯ ಮಾಹಿತಿ,ಪ್ರವಾಸಿ ತಾಣಗಳ ವಿವರಗಳಿಗಾಗಿ kannadanet.com, kannadanet.blogspot.com ನೋಡಿ

Saturday, December 10, 2011

ಓದುಗರ ಪುಸ್ತಕ ಪ್ರೀತಿ : ಪುಸ್ತಕ ಮಳಿಗೆಗಳಲ್ಲಿ ಭರ್ಜರಿ ವಹಿವಾಟು




ನಿನ್ನೆ ಇಲ್ಲಿ ಅನಾವರಣಗೊಂಡ ೭೮ನೇ ಆಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಇಲ್ಲಿನ ಪುಸ್ತಕ ಮಳಿಗೆಗಳು ಕಳೆಕಟ್ಟಿವೆ. ದಾಖಲೆಯನ್ನಬಹುದಾದ ೨೪೦ ಪುಸ್ತಕ ಮಳಿಗೆಗಳು, ಪುಸ್ತಕ ಮಳಿಗೆಗಳ ಸುತ್ತ ಪುಸ್ತಕ ಇರಿಸಿ ಮಾರಾಟ ಮಾಡುವವರೂ ಸೇರಿದಂತೆ ಸುಮಾರು ೩೦೦ ಪುಸ್ತಕ ವ್ಯಾಪಾರಿಗಳು ಈ ಅಕ್ಷರ ಜಾತ್ರೆಯಲ್ಲಿ ಪಾಲ್ಗೊಂಡಿರುವುದು ಸಾಹಿತ್ಯ ಪ್ರಿಯರಿಗೆ ಭೂರಿ ಭೋಜನ  ಒದಗಿಸಿದಂತಾಗಿದೆ.
ಸಾಹಿತ್ಯ ಪ್ರಿಯರು ಅದು ಮುಖ್ಯವಾಗಿ ಉತ್ತರ ಕರ್ನಾಟಕದ ಗ್ರಾಮೀಣರು ಪುಸ್ತಕ ಮಳಿಗೆಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪುಸ್ತಕ ಖರೀದಿಸುತ್ತಿದ್ದುದು ಈ ಸಮ್ಮೇಳನದಲ್ಲಿ ಪುಸ್ತಕ ಖರೀದಿ ಜೋರಾಗಿಯೇ ನಡೆಯುವುದರ ಮುನ್ಸೂಚನೆಯಂತಿದೆ.  ಸಮ್ಮೇಳನ ಆರಂಭದ ದಿನದಂದು ಹೆಚ್ಚಿನ ಪುಸ್ತಕ ವ್ಯಾಪಾರ ಕಾಣದ ಪುಸ್ತಕ ವ್ಯಾಪಾರಿಗಳಿಗೆ ಇಂದಿನ ವಹಿವಾಟು ಖುಷಿ ನೀಡಿದೆ.
ಈ ಪುಸ್ತಕ ಮಳಿಗೆಗಳಲ್ಲಿ ಸುಮಾರು ೫೦ ಕ್ಕೂ ಹೆಚ್ಚು ದೊಡ್ಡ ಮಳಿಗೆಗಳಿದ್ದು, ನಾಡಿನ ಹೆಸರಾಂತ ಪ್ರಕಾಶನ ಸಂಸ್ಥೆಗಳು, ಧಾರ್ಮಿಕ ಪುಸ್ತಕ ಪ್ರಕಾಶನ ಸಂಸ್ಥೆಗಳು, ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷಾ ಜ್ಞಾನ ಮಂಜರಿಗಳ ಪ್ರಕಾಶಕರು, ಕೃಷಿ, ಯೋಗ, ಶಿಕ್ಷಣ, ಮಕ್ಕಳ ಸಾಹಿತ್ಯ, ವಚನ, ದಾಸ ಹಾಗೂ ದಲಿತ ಸಾಹಿತ್ಯ ಮತ್ತು ಕಮ್ಯುನಿಸ್ಟ್ ಸಾಹಿತ್ಯ ಸೇರಿದಂತೆ ಹತ್ತು ಹಲವು ಸಾಹಿತ್ಯ ಪ್ರಕಾರಗಳಿಗಾಗಿಯೇ ಮೀಸಲಿರುವ ಪ್ರಕಾಶನ ಸಂಸ್ಥೆಗಳು ಹಾಗೂ ಸಣ್ಣ ಪುಟ್ಟ ನೂರಾರು ಪ್ರಕಾಶಕರು ಪಾಲ್ಗೊಂಡಿರುವುದು ಕನ್ನಡ ಸಾಹಿತ್ಯದ ಹರವು ಹಾಗೂ ಕನ್ನಡ ಪುಸ್ತಕ ಪ್ರಪಂಚದ ಶ್ರೀಮಂತಿಕೆ ಅನಾವರಣಗೊಂಡಿದೆ. 
ಪುಸ್ತಕ ಪ್ರಿಯರನ್ನು ಆಕರ್ಷಿಸಲು ಇಲ್ಲವೆ ತಮ್ಮ ಪುಸ್ತಕ ಮಾರಾಟ ತೀವ್ರತೆ ಪಡೆದುಕೊಳ್ಳಲೆಂದೋ ಶೇ ೧೦ ರಿಂದ ೫೦ ರವರೆಗೆ ರಿಯಾಯತಿ ಮಾರಾಟ ಎಲ್ಲ ಮಳಿಗೆಗಳಲ್ಲೂ ಕಂಡುಬರುತ್ತಿದೆ. 
ದೊಡ್ಡ ಮಳಿಗೆಗಳು:
ಪುಸ್ತಕ ಪ್ರಕಾಶಕರು ಉತ್ತರ ಹಾಗೂ ದಕ್ಷಿಣ ಕರ್ನಾಟಕದ ವಿವಿದ ಜಿಲ್ಲೆಗಳಿಂದ  ಆಗಮಿಸಿದ್ದು, ಅದರಲ್ಲಿ ಬೆಂಗಳೂರಿನ ಸಪ್ನ ಬುಕ್ ಹೌಸ್, ನವ ಜೋತಿ ಪ್ರಕಾನ, ಓಕಾಂರ ಪ್ರಕಾಶನ ಮತ್ತು ಲಂಕೇಶ ಪ್ರಕಾಶನ, ವಾಸನ ಪ್ರಕಾಶನ, ಆಕೃತಿ ಬುಕ್ ಹೌಸ್ , ಸಾಧನಾ ಪ್ರಕಾಶನ , ಗಣೇಶ ಪ್ರಕಾಶನ , ನವಕರ್ನಾಟಕ ಪ್ರಕಾಶನ, ಗುಲ್ಬರ್ಗಾದ ನ್ಯೂ ಕರ್ನಾಟಕ ಪುಸ್ತಕಾಲಯ , ಗದುಗಿನ ಲಡಾಯಿ ಪ್ರಕಾಶನ, ಪಾರು ಪ್ರಕಾಶನ ಹಾಗೂ ಧಾರವಾಡದ ಚೈತನ್ಯ ಪ್ರಕಾಶನ ಮನೋಹರ ಗ್ರಂಥಮಾಲೆ ಹುಬ್ಬಳ್ಳಿಯ ಆದರ್ಶ ಮಳಿಗೆ ಪುಸ್ತಕ ವಿತರಕರು,ಶಿವಮೊಗ್ಗದ ಸಂಗೀತ್ ಬುಕ್ ಹೌಸ್, ಹಾಸನದ ಕಾಂಪಿಟ್ಯೆಷನ್ ಬುಕ್ ಹೌಸ್, ಅಖಿಲ ಭಾರತ ವಿಧ್ಯಾರ್ಥಿ ಸಂಘಟನೆಯ ಪುಸ್ತಕಗಳು ಹಾಗೂ ಸಾಗರದ ಅಕ್ಷರ ಪ್ರಕಾಶಗಳು ಪ್ರಮುಖವಾಗಿ ಕಂಡು ಬಂದವು.
 ಕರ್ನಾಟಕ ವಿಶ್ವವಿದ್ಯಾಲಯ,ಮೈಸೂರು ವಿಶ್ವವಿದ್ಯಾಲಯ ಹಾಗೂ ಕನ್ನಡ ವಿಶ್ವವಿದ್ಯಾಯಲದ ಪ್ರಸಾರಂಗದ ಪುಸ್ತಕ ಪ್ರದರ್ಶನದಲ್ಲಿ  ಸುಲಭ ಬೆಲೆಯ ಅವತರಣಿಕೆಗಳು ಪುಸ್ತಕ ಪ್ರಿಯರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದ್ದವು,  

ಧಾರ್ಮಿಕ ಮಳಿಗೆಗಳು:
ಇನ್ನು ಪುಸ್ತಕ ಪ್ರಕಾಶನದಲ್ಲಿ ಧಾರ್ಮಿಕ ಸಾಹಿತ್ಯ ಗಮನಸೆಳೆಯುವಂತಿದ್ದು, ಗದಗಿನ ಸತ್ಯನಾರಾಯಣ ಮಳಿU, ಬೆಂಗಳೂರಿನ ಶೃಂಗಾರ ಪ್ರಕಾಶನ  ಹಾಗೂ ಹಾಲುಮತ ಸಾಹಿತ್ಯ ಭಂಡಾರ, ಬಸವನಬಾಗೆವಾಡಿಯ  ಚನ್ನಬಸವೇಶ್ವರ ಸಾಹಿತ್ಯ ಬಂಢಾರ ಹುಬ್ಬಳ್ಳಿಯ ರಾಮಕೃಷ್ಣ ಪರಮಹಂಸ ಪುಸ್ತಕ ಭಂಡಾರ  ಹೀಗೆ ಹತ್ತು ಹಲವು ಪುಸ್ತಕ ಮಳಿಗೆಗಳಲ್ಲಿ ಧಾರ್ಮಿಕ ಹಾಗೂ ಅನುಭಾವ ಸಾಹಿತ್ಯ ಕೃತಿಗಳ ಮಾರಾಟ ಮತ್ತು  ಶಿರಸಿಯ ನಿಸರ್ಗ ಪ್ರಕಾಶನ ಪರಿಸರ ಕುರಿತು ಪ್ರಕಟಿಸಿದ ಪುಸ್ತPಗಳ ಮಾರಾಟ ಜೋರಾಗಿತ್ತು. 
ಕಾದಂಬರಿಗೆ ಶುಕ್ರದೆಸೆ: ಅವಸರದ ಬದುಕಿನ ಇಂದಿನ ದಿನಗಳಲ್ಲಿ ಕಾದಂಬರಿ ಓದುವ ಹವ್ಯಾಸ ಕ್ಷೀಣಿಸುತ್ತಿರುವ ಹಿನ್ನಲೆಯಲ್ಲಿ ಕಾದಂಬರಿ ಕೃತಿಗಳಿಗೆ ಹೆಚ್ಚಿನ ರಿಯಾಯಿತಿ ನೀಡುವ ಮೂಲಕ ಕಾದಂಬರಿಗಳ ಭರ್ಜರಿ ಮಾರಾಟಕ್ಕೆ ಬೆಂಗಳೂರಿನ ಜ್ಯೋತಿ ಪ್ರಕಾಶನ ಮುಂದಾಗಿದೆ ಈ  ಮಳಿಗೆಯಲ್ಲಿ  ಸುಮಾರು ೫೦೦ ಕ್ಕೊ ಹೆಚ್ಚು ಶೀರ್ಷಿಕೆಯುಳ್ಳ ಕಾದಂಬರಿಗಳನ್ನು ೪ಕ್ಕೆ ಹತ್ತು ರೂಪಾಯಿಯಂತೆ ಮಾರಲಾಗುತ್ತಿದೆ ಕಾದಂಬರಿ ಪ್ರಿಯರು ಇಲ್ಲಿ ತಮಗೆ ಇಷ್ಟಬಂದ ಕಾದಂಬರಿಗಳನ್ನು ಆಯ್ದು ಖರಿದಿಸಬಹುದಾಗಿದೆ.
ಯುವಜನರು ಹಾಗೂ ವಿಧ್ಯಾರ್ಥಿಗಳಿಗಾಗಿ ವೃತ್ತಿ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಭದಿಸಿದಂತೆ ಕೋಲಾರದ ಎಸ್.ಎಂ ವಿ ಪ್ರಕಾಶನ,ಧಾರವಾಡದ ಸ್ಪರ್ಧಾಸ್ಪೂರ್ತಿ ಬೆಂಗಳೂರಿನ ಸ್ಪರ್ಧಾಚೈತ್ರ ಹಾಗೂ ಇನೊಪೋಬೈನ್  ವಿಜಾಪುರದ ಸ್ಪರ್ಧಾವಿಜೇತ ನಿಯತಕಾಲಿಕೆಯ ಪ್ರಕಾಶಕರ ಮಳಿಗೆಗಳಲ್ಲಿ ವಿದ್ಯಾರ್ಥಿಗಳ ದಂಡೇ ನೆರೆದಿರುತ್ತಿದೆ.
ಬೆಂಗಳೂರಿನ ಅಂಚೆ ಚೀಟಿ ಸಂಗ್ರಾಹಕ (ಫಿಲಾಟೆಲಿಸ್ಟ್) ರೊಬ್ಬರು ಅಂಚೆ ಚೀಟಿಗಳನ್ನು ಮಾರಾಟಕ್ಕೆ ಇರಿಸಿದ್ದು ಈ ಮಳಿಗೆಯಲ್ಲಿ ಕರ್ನಾಟಕಕ್ಕೆ ಸಂಭದಿಸಿದಂತೆ ಅಂಚೆ ಇಲಾಖೆ ಈ ವರೆಗೆ ಹೊರತಂದ ಕರ್ನಾಟಕ   ಅಂಚೆ ಚೀಟಿಗಳನ್ನು ಪ್ರದರ್ಶಿಸಿದ್ದಾರೆ ಈ ಪ್ರದರ್ಶನದಲ್ಲಿ ೧೯೬೦ರಲ್ಲಿ ಹೊರತಂದ  ಶತಾಯುಷಿ ಸರ್ ಎಂ, ವಿಶ್ವೇಶ್ವರಯ್ಯನವರ ಅಂಚೆ ಚೀಟಿಯಿಂದ ಹಿಡಿದು ೨೦೧೧ ರಲ್ಲಿ   ನೇಕೃಷ್ಣದೇವರಾಯರನ ೫೦೧ನೇ ಪಟ್ಟಾಬಿಷೇಕದ ನೆನಪಿನ ಅಂಚೆ ಚೀಟಿಯವರೆಗೆ ನೊಡಸಿಗುತ್ತವೆ. ಇದಲ್ಲದೆ ಡಾ|| ರಾಜ್‌ಕುಮಾರ ಅವರ ಜೀವನ ಮತ್ತು ಯೋಗಾಭ್ಯಾಸ ಕುರಿತ ಅಪರೂಪದ ಚಿತ್ರಗಳು ಪ್ರದರ್ಶನಕ್ಕಿವೆ.
ಬೆಳಗಾವಿಯ ಗೊಪಾಲ ತಾವರೆ ಎನ್ನುವ ಕನ್ನಡ ಪ್ರೇಮಿಯೊಬ್ಬರು ಕನ್ನಡ ಬಾವುಟದ ಬಣ್ಣಗಳಲ್ಲಿ ಸೀರೆ,ಟೋಪಿ,ಶಲ್ಯ ಪಟಗ ಹಾಗೂ ಕನ್ನಡದ ಬಾವುಟಗಳನ್ನು ಮಾರಾಟಕ್ಕೆ ಇರಿಸಿದ್ದು ಈ ಮಳಿಗೆಯಲ್ಲಿ ಯುವಜನರ ನೂಕು ನುಗ್ಗುಲು ಸಾಮಾನ್ಯವಾಗಿತ್ತು. ಗಂಗಾವತಿಯ ಗಾದಿ ಹೊಲೆಯುವ ಬಡೇಸಾಬ ಪ್ರವೃತ್ತಿಯಿಂದ ಒಬ್ಬ ಕಲಾವಿದ.  ತಾನು ರೇಖಿಸಿದ ೨೫ಕ್ಕೂ ಹೆಚ್ಚು ಚಿತ್ರಗಳನ್ನು ಅಚ್ಚುಮಾಡಿ ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಿದ್ದಾನೆ.  ಈತನ ಚಿತ್ರಗಳ ವೈಶಿಷ್ಟವೆಂದರೆ, ಒಂದೇ ಚಿತ್ರದಲ್ಲಿ ಇಬ್ಬರ ಅಥವಾ ಮೂವರು ಗಣ್ಯರ ಚಿತ್ರಗಳನ್ನು ಬಿಡಿಸುವುದು.  ಮುಖ್ಯವಾಗಿ ಡಾ. ರಾಜಕುಮಾರ್, ಮಕ್ಕಳಾದ ಶಿವರಾಜ್‌ಕುಮಾರ್ ಮತ್ತು ಪುನೀತ್‌ನ ಒಂದೇ ಚಿತ್ರ, ಕುವೆಂಪು ಮತ್ತು ಮಾಸ್ತಿ, ಗಾಂಧೀಜಿ ಮತ್ತು ಅಣ್ಣಾ ಹಜಾರೆ ಚಿತ್ರಗಳು ಗಮನ ಸೆಳೆಯುತ್ತಿವೆ.  ಮೂರು ವ್ಯಕ್ತಿಗಳುಳ್ಳ ಚಿತ್ರದಲ್ಲಿ ಮಧ್ಯದ ವ್ಯಕ್ತಿಯ ಕಣ್ಣುಗಳು ಎಡ ಮತ್ತು ಬಲ ಚಿತ್ರಗಳಿಗೂ ಮೇಳೈಸಿರುವುದು ಒಂದು ವಿಶೇಷ.  ಬೆಂಗಳೂರಿನ  ಉತ್ಥಾನ ಅಸೋಸಿಯೇಟ್ಸನ ಪ್ರಕಾಶನ ಸಂಸ್ಥೆ ಸಾವಯವ ಕೃಷಿಗೆ ಸಂಭಂದಪಟ್ಟಂತೆ ೨೪ ಸಿಡಿಗಳನ್ನು ಮಾರಟಕ್ಕೆ ಇರಿಸಿದ್ದು ಈ ಪುಸ್ತಕ ಪ್ರದರ್ಶನ ಇನ್ನೋಂದು ವಿಶೇಷವಾಗಿದೆ ಈ ಮಳಿಗೆಯಲ್ಲಿ ನಾಟಿ ಕೊಳಿ ಸಾಕಾಣಿಕೆ, ಹೈನುಗಾರಿಕೆ, ಮೊಲ ಹಾಗೂ ಕುರಿ ಸಾಕಾಣಿಕೆ ಹಾಗೂ ಸಾವಯವ ಕೃಷಿ ಕುರಿತು ಶ್ರಮಜೀವಿ ಅಗ್ರಿ ಫಿಲ್ಮ ಹೆಸರಿನಲ್ಲಿ ಸಿಡಿಗಳನ್ನು ಮಾರಾಟಕ್ಕೆ ಇರಿಸಿದ್ದಾರೆ.  ಈ ಸಿಡಿಗಳ ಮಾರಾಟದಿಂದ ಕನ್ನಡ ಕೃಷಿ ಸಾಹಿತ್ಯ ಸಾಫ್ಟ್‌ವೇರ್ ಲೋಕಕ್ಕೆ ಪರಿಚಯವಾದದ್ದು ಮುಂದಿನ ದಿನಗಳಲ್ಲಿ ಸಾಹಿತ್ಯ ಕೃತಿಗಳು ಸಿಡಿ ರೂಪದಲ್ಲಿ ಮಾರಾಟಕ್ಕೆ ಲಭ್ಯವಾಗಬಹುದೇ ಎನ್ನುವುದರ ಮುನ್ಸೂಚನೆ ಎನ್ನಿಸಿತು.  
  ಬೆಂಗಳೂರಿನ ಆನಂದ್ ಆಡಿಯೋ ವಿಡಿಯೋಸ್ ಪ್ರಕಾಶನ ಸಂಸ್ಥೆಯ ಕನ್ನಡ ಚಿತ್ರಗೀತೆ, ಭಾವಗೀತೆ, ಭಕ್ತಿಗೀತೆ, ಹಾಗೂ ಜಾನಪದ ಗೀತೆ ಮತ್ತು ಗಂಗಾವತಿ ಪ್ರಾಣೇಶ್ ಅವರ ಹಾಸ್ಯ ಲಹರಿಗಳ ೭೮ಕ್ಕೂ ಹೆಚ್ಚು ಅವತರಣಿಕೆಗಳ ಕ್ಯಾಸೆಟ್‌ಗಳನ್ನು ಮಾರಾಟಕ್ಕಿರಿಸಿದ್ದು, ಖರೀದಿ ಜೋರಾಗಿಯೇ ಸಾಗಿದೆ.  
ಬೆಂಗಳೂರಿನ ಅನಿತ ಪಬ್ಲಿಕೇಷನ್ ಸಂಸ್ಥೆ, ಶಾಲೆಗಳಲ್ಲಿ ಶಿಕ್ಷಕರಿಗೆ ಬೋಧಿಸಲು ಅನುಕೂಲವಾಗುವಂತೆ, ದೊಡ್ಡ ಅಳತೆಯ ಪಟಗಳನ್ನು ತಯಾರಿಸಿದ್ದು, ಇಂಗ್ಲೀಷ್‌ನಲ್ಲಿ ಕಾಲಗಳ ಕಲಿಕೆಗೆ ಪಾಠವನ್ನು ಸಿದ್ಧಗೊಳಿಸಿ ಮಾರಾಟಕ್ಕಿರಿಸಿದೆ.  ಈ ಪಟಗಳ ಖರೀದಿಗೆ ಶಿಕ್ಷಕರು ಮುಗಿ ಬೀಳುತ್ತಿದ್ದುದು ವಿಶೇಷ.
ಸಮ್ಮೇಳನದ ಅಂತಿಮ ದಿನ ಭಾನುವಾರವಾಗಿರುವುದರಿಂದ ಸರ್ಕಾರಿ ನೌಕರರಿಗೆ ರಜಾ ದಿನ.  ಅಧಿಕ ಸಂಖ್ಯೆಯ ನೌಕರರು, ಸಾರ್ವಜನಿಕರು ಪುಸ್ತಕ ಮೇಳಕ್ಕೆ ಲಗ್ಗೆ ಇಡುವ ಸಾಧ್ಯತೆ ಹೆಚ್ಚು.  ಗಂಗಾವತಿ ಸಾಹಿತ್ಯ ಸಮ್ಮೇಳನ, ಈ ಹಿಂದಿನ ಸಮ್ಮೇಳನದ ಪುಸ್ತಕ ಮಾರಾಟ ಪ್ರಮಾಣದ ದಾಖಲೆಯನ್ನು ಮುರಿಯುವುದೇ ಕಾದು ನೋಡಬೇಕು.

No comments:

Post a Comment